Information on HIV and AIDS
ಹೆಚ್ ಐ ವಿ, ಏಡ್ಸ್ ಕುರಿತು ಮಾಹಿತಿ
Date:
05/03/2020
View Photos
Description:
Information on HIV and AIDS http://sullia.suddinews.com/archives/443656 05/03/2020
ಹೆಚ್ ಐ ವಿ, ಏಡ್ಸ್ ಕುರಿತು ಮಾಹಿತಿ http://sullia.suddinews.com/archives/443656 05/03/2020 ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಮತ್ತು ರೆಡ್ ರಿಬ್ಬನ್ ಕ್ಲಬ್ ನ ಸಹಯೋಗದಲ್ಲಿ ಹೆಚ್ ಐವಿ ಏಡ್ಸ್ ಕುರಿತು ಮಾಹಿತಿ ಹಾಗೂ ಜಾಗೃತಿ ಕಾರ್ಯಕ್ರಮ ಮಾ.5 ರಂದು ಕಾಲೇಜಿನಲ್ಲಿ ನಡೆಯಿತು. ಪ್ರಾಥಮಿಕ ಆರೋಗ್ಯ ಕೇಂದ್ರ ಸುಬ್ರಹ್ಮಣ್ಯ ಇಲ್ಲಿನ ವೈದ್ಯಾಧಿಕಾರಿಗಳಾದ ಡಾ. ತ್ರಿಮೂರ್ತಿ, ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾಹಿತಿ ನೀಡಿದರು. ಮಹಾವಿದ್ಯಾಲಯದ ಪ್ರಾಂಶುಪಾಲರಾದ ಪ್ರೊ. ಉದಯಕುಮಾರ್. ಕೆ ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯ ಸಹಾಯಕಿ ಹೇಮಲತಾ, ರಾ.ಸೇ.ಯೋ. ಸಹ ಯೋಜನಾಧಿಕಾರಿಗಳಾದ ಪ್ರೊ. ಆರತಿ.ಕೆ.,ಪ್ರೊ.ನಮಿತಾ.ಎಂ.ಎ.,ಕಾಲೇಜಿನ ರೆಡ್ ರಿಬ್ಬನ್ ಕ್ಲಬ್ ನ ಅಧ್ಯಕ್ಷ ಸುಜಿತ್. ಕೆ.ಜೆ., ಉಪಾಧ್ಯಕ್ಷೆ ಸುರಕ್ಷಾ ಕೆ.ಜೆ. ಮತ್ತು ರಾ.ಸೇ.ಯೋ. ಘಟಕದ ನಾಯಕರು ಉಪಸ್ಥಿತರಿದ್ದರು. ರಾ.ಸೇ.ಯೋ. ಘಟಕದ ನಾಯಕ ದೀಪಕ್. ಬಿ. ಸ್ವಾಗತಿಸಿ,ರೆಡ್ ರಿಬ್ಬನ್ ಕ್ಲಬ್ ನ ಅಧ್ಯಕ್ಷ ಸುಜಿತ್.ಕೆ.ಜೆ. ವಂದಿಸಿದರು. ಲೋಹಿತ್.ಎಂ.ಡಿ ಕಾರ್ಯಕ್ರಮ ನಿರೂಪಿಸಿದರು.